Paul David Tripp

Parenting- 14 Gospel Principles That Can Radically Change Your Family (ಕನ್ನಡ)

Paperback

225.00

992 in stock

Category:

Description

ಪೋಷಕರಾಗಿ ನಿಮ್ಮ ಕರೆಯುವಿಕೆ ಏನು?

ಬಟ್ಟೆಗಳನ್ನು ಮಡಿಸುವುದು, ಪ್ರಯಾಣಕ್ಕಾಗಿ ಟ್ಯಾಕ್ಸಿ ಸಂಚಾರದ ವೇಳಾಪಟ್ಟಿಗಳನ್ನು ಸಂಯೋಜಿಸುವುದು, ಮತ್ತು ವಿಮಾನದಿಂದ ವಿಮಾನಕ್ಕೆ ಸಂಚಾರ ಮಾಡುವುದರ ಮಧ್ಯದಲ್ಲಿ, ಬಹಳಷ್ಟು ಪೋಷಕರು ಕಳೆದುಹೋಗಿರುತ್ತಾರೆ. ಎಲ್ಲವನ್ನೂ “ಸರಿಯಾದ ರೀತಿಯಲ್ಲಿ” ಮಾಡುವ ಮತ್ತು “ಒಳ್ಳೆಯ ಮಕ್ಕಳನ್ನು” ಬೆಳೆಸುವ ಒತ್ತಡವನ್ನು ಹೊತ್ತುಕೊಂಡು, ಪ್ರಾಯೋಗಿಕ ಸಲಹೆಗಳ ಮತ್ತು ಭರವಸೆಯ ಸೂತ್ರಗಳ ಅನ್ವೇಷಣೆಯಲ್ಲಿ, ಪೋಷಕರಾಗಿ ನಮಗಿರುವ ಮೂಲ ಉದ್ದೇಶದಿಂದ ನಮ್ಮ ದೃಷ್ಟಿ ಕದಲುವುದು ಬಹಳ ಸುಲಭ.

ಈ ಜೀವ-ದಾಯಕ ಪುಸ್ತಕದಲ್ಲಿ, ಪಾಲ್‌ ಟ್ರಿಪ್‌ ಅವರು ಪೋಷಕರಿಗೆ ಮಾಡಬೇಕಾದ ಕಾರ್ಯ ಪಟ್ಟಿಗಳಿಗಿಂತಲೂ ಮುಖ್ಯವಾದ ಅಂಶಗಳನ್ನು ನೀಡುತ್ತಾರೆ. ಆ ಪಟ್ಟಿಗಳ ಬದಲಾಗಿ, ಪೋಷಕರಾದ ನಮಗೆ ದೇವರ ಯೋಜನೆಯ ಮಹಾ-ಚಿತ್ರನೋಟವನ್ನು ಲೇಖಕರು ಪ್ರಸ್ತುತ ಪಡಿಸಿದ್ದಾರೆ. ಸುವಾರ್ತೆಯನ್ನು ಕೇಂದ್ರ ಬಿಂದವಾಗಿಸಿಕೊಂಡಿರುವ 14 ಮೂಲಭೂತ ತತ್ವಗಳನ್ನು ವಿವರಿಸುತ್ತಾ, ಲೇಖಕರು ಪೋಷಕರಿಗೆ ಅಗತ್ಯವಿರುವ ಇತೀಚಿಗಿನ ತಂತ್ರಗಳಿಗಿಂತಲೂ ಮಿಗಿಲಾದ ವಿಷಯಗಳ ಅಗತ್ಯವಿದೆ ಎಂದು ನಮಗೆ ತೋರಿಸಿಕೊಟ್ಟಿದ್ದಾರೆ. ಇದರ ಬದಲಾಗಿ, ನಮಗೆ ದೇವರ ರಕ್ಷಿಸುವ ಕೃಪೆಯ ಅಗತ್ಯವಿದೆ. ಅಂದರೆ, ಪೋಷಕರಾಗಿ ನಾವು ಮಾಡುವ ಎಲ್ಲದರಲ್ಲಿಯೂ ನಾವು ನೋಡುವ ರೀತಿಯನ್ನು ಬದಲಿಸಲು ಶಕ್ತವಾಗಿರುವ ಕೃಪೆಯು ನಮಗೆ ಅಗತ್ಯವಿದೆ.

ನಮ್ಮ ಮಕ್ಕಳಲ್ಲಿ ಜೀವನ-ಬದಲಾವಣೆಯನ್ನು ತಯಾರಿಸುವ ಪ್ರಯತ್ನದ ಹೊರೆಯಿಂದ ಬಿಡುಗಡೆ ಹೊಂದಿಕೊಂಡು, ನಾವು ದೂರದೃಷ್ಟಿಯಿಂದ, ಉದ್ದೇಶದಿಂದ, ಮತ್ತು ಸಂತೋಷದಿಂದ ತುಂಬಿ ಹರಿಯುವ ಪೋಷಕ ಕಾರ್ಯದ ದೃಷ್ಟಿಕೋನವನ್ನು ಅಪ್ಪಿಕೊಳ್ಳೋಣ.

You may also like…